ಕಡಿಯಾಳಿ ಯಶೋಧ ಉಪಾಧ್ಯ ನಿಧನ
Update: 2023-08-22 16:22 GMT
ಉಡುಪಿ, ಆ.22: ಕಡಿಯಾಳಿ ಶ್ರೀಮಹಿಷಮರ್ಧಿನಿ ದೇವಸ್ಥಾನದ ಮಾಜಿ ಧರ್ಮದರ್ಶಿ ದಿ.ಕಡಿಯಾಳಿ ಅನಂತರಾಮ ಉಪಾಧ್ಯರ ಪತ್ನಿ ಕೆ. ಯಶೋಧ ಉಪಾಧ್ಯ (89)ಮಂಗಳವಾರ ಮುಂಜಾನೆ ಹೃದಯಾಘಾತ ದಿಂದ ನಿಧನರಾಗಿದ್ದಾರೆ. ಇವರು ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ 8 ಮಂದಿ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಯಶೋಧ ಉಪಾಧ್ಯ ಇವರು ಸ್ವಇಚ್ಚೆಯಿಂದ ತಮ್ಮ ಕಣ್ಣು ಹಾಗೂ ಚರ್ಮವನ್ನು ಮಣಿಪಾಲ ಆಸ್ಪತ್ರೆಗೆ ದಾನವಾಗಿ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇವರ ನಿಧನಕ್ಕೆ ಕಡಿಯಾಳಿ ದೇವಸ್ಥಾನದ ಆಡಳಿತ ಮಂಡಳಿ ಏದ್ಯಕ್ಷ ಡಾ. ಕಟ್ಟೆ ರವಿರಾಜ ಆಚಾರ್ಯ, ಕೆ.ರಾಘವೇಂದ್ರ ಕಿಣಿ ಸಂತಾಪ ವ್ಯಕ್ತಪಡಿಸಿದ್ದಾರೆ.