ಉಳ್ಳಾಲ | ಮದನಿ ವಿದ್ಯಾ ಸಂಸ್ಥೆಯ ಸಂಚಾಲಕ ಹಾಜಿ ಯು.ಕೆ ಇಬ್ರಾಹಿಂ ನಿಧನ
Update: 2023-10-28 08:59 GMT
ಉಳ್ಳಾಲ: ದರ್ಗಾ ಆಡಳಿತ ಸಮಿತಿ ಸದಸ್ಯರಾಗಿ, ಅಲೇಕಲಾ ಜುಮಾ ಮಸೀದಿಯ ಅಧ್ಯಕ್ಷ ರಾಗಿ, ಉಳ್ಳಾಲ ಸೈಯ್ಯದ್ ಮದನಿ ಚಾರೀಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷರಾಗಿದ್ದ ಅಲೇಕಲಾ ಮದನಿ ಜ್ಯೂನಿಯರ್ ಕಾಲೇಜಿನ ಆಡಳಿತ ಸಮಿತಿಯ ಸಂಚಾಲಕ ಹಾಜಿ ಯು.ಕೆ.ಇಬ್ರಾಹಿಂ (62 ) ಅಲ್ಪ ಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರ ಅಂತಿಮ ಸಂಸ್ಕಾರ ಉಳ್ಳಾಲ ದರ್ಗಾ ವಠಾರದ ದಫನ ಭೂಮಿಯಲ್ಲಿ ನಡೆಯಿತು. ಮೃತರು ಪತ್ನಿ ಮತ್ತು ಮೂವರು ಗಂಡು ಮಕ್ಕಳ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಗಲಿಕೆ ಉಳ್ಳಾಲ ದರ್ಗಾ ನಿಕಟ ಪೂರ್ವ ಆಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯ ಸಂಯೋಜಕ ಫಾರೂಕ್ ಉಳ್ಳಾಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.