ಮಂಗಳೂರು: ಡಿ.ಎಂ ಅಬ್ದುಲ್‌ ಅಝೀಝ್ ಸಾಹೇಬ್ ನಿಧನ

Update: 2024-02-21 06:20 GMT

ಮಂಗಳೂರು: ಡಿ.ಎಂ ಅಬ್ದುಲ್‌ ಅಝೀಝ್ ಸಾಹೇಬ್ ಅವರು ಬುಧವಾರ ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೂಲತಃ ‌ಕೂಳೂರಿನವರಾಗಿದ್ದ ಇವರು ಇತ್ತೀಚೆಗೆ ನಗರದ ಫಳ್ನೀರ್‌ನಲ್ಲಿ ವಾಸವಾಗಿದ್ದರು. 

ಜಮಾಅತೆ ಇಸ್ಲಾಮೀ ಹಿಂದ್‌ ನ ಸಕ್ರಿಯ ಸದಸ್ಯರಾಗಿದ್ದ ಇವರು ಕಸಬಾ ಬೆಂಗರೆಯ ಎಆರ್‌ಕೆ ಟ್ರಸ್ಟ್ ಇದರ ಟ್ರಸ್ಟಿಯಾಗಿ,ಅಧ್ಯಕ್ಷರಾಗಿ ‌ಕಾರ್ಯನಿರ್ವಹಿಸಿದ್ದರು. ನಗರದ ಐಡಿಯಲ್ ಪ್ರಿಂಟ್ ನ ವ್ಯವಸ್ಥಾಪಕರಾಗಿದ್ದರು.

 ಮೃತರು ಮೂವರು ಪುತ್ರರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಅಸರ್ ನಮಾಝಿನ ಬಳಿಕ ಝೀನತ್ ಬಕ್ಷ್ ಮಸೀದಿ ಬಂದರ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News

ವಿಮಲ ಭಟ್
ಕಮಲಾಕ್ಷ
ಹಮೀದ್ ಹಾಜಿ