ಮರಿಯಮ್ ರಮೀಝಾ ನಿಧನ
Update: 2023-10-29 12:11 GMT
ಪುತ್ತೂರು: ಹೆರಿಗೆ ವೇಳೆಯಲ್ಲಿ ತೀವ್ರ ಅಸೌಖ್ಯ ಉಂಟಾಗಿ ಪುತ್ತೂರು ತಾಲೂಕಿನ ಮಾಡಾವು ನಿವಾಸಿ ಮುಹಮ್ಮದ್ ರಫೀಕ್ ಎಂಬವರ ಪತ್ನಿ ಮರಿಯಮ್ ರಮೀಝಾ(28) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು.
ಮೃತರು ಸಮಸ್ತ ಕೇರಳ ಮತವಿದ್ಯಾಭ್ಯಾಸ ಬೋರ್ಡ್‍ನ ಸದಸ್ಯ ಪರ್ಲಡ್ಕ ಗೋಳಿಕಟ್ಟೆ ನಿವಾಸಿ ಅಬ್ದುಲ್ ರಶೀದ್ ಹಾಜಿ ಅವರ ಪುತ್ರಿ.
ಮೃತರು ತಂದೆ, ತಾಯಿ, ಪತಿ, ಕುಟುಂಬಸ್ಥರು, ನವಜಾತ ಶಿಶು ಸಹಿತ ಮೂವರು ಮಕ್ಕಳನ್ನು ಅಗಲಿದ್ದಾರೆ.