ಮೊಯ್ದಿನ್ ಕುಂಞಿ ತಲೆಕ್ಕಿ ನಿಧನ
Update: 2025-01-14 02:15 GMT
ವಿಟ್ಲ, ಜ.13: ಸಾಲೆತ್ತೂರು ತಲೆಕ್ಕಿ ಐತಕುಮೇರು ನಿವಾಸಿ ಎ.ಸಿ.ಮೊಯ್ದಿನ್ ಕುಂಞ ಅನಾರೋಗ್ಯದಿಂದ ಸೋಮವಾರ ನಿಧನರಾದರು.
ಇವರು ಕೊಳ್ತಾಡು ಗ್ರಾಪಂನ ಮಾಜಿ ಉಪಾಧ್ಯಕ್ಷರಾಗಿ, ಸತತ ಏಳು ಬಾರಿ ಪಂಚಾಯತ್ ಸದಸ್ಯರಾಗಿದ್ದರು. ಸಾಲೆತ್ತೂರು ಮುಸ್ಲಿಮ್ ಜಮಾಅತ್ ಅಧ್ಯಕ್ಷರಾಗಿ, ಕಟ್ಟತ್ತಿಲ ಜುಮಾ ಮಸ್ಟಿದ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಅಲ್ ಅನ್ಸಾರ್ ಪತ್ರಿಕೆಯ ಸ್ಥಾಪಕ ಸಂಪಾದಕರೂ ಆಗಿದ್ದರು. ವಿಟ್ಲದಲ್ಲಿ ಎಸಿಎಂ ಟೂರ್ಸ್ ಮತ್ತು ಟ್ರಾವೆಲ್ಸ್ ಸಂಸ್ಥೆ ನಡೆಸುತ್ತಿದ್ದರು. ಮೃತರು ಪತ್ನಿ, ಮೂವರು ಪುತ್ರಿಯರು, ನಾಲ್ವರು ಪುತ್ರರನ್ನು ಅಗಲಿದ್ದಾರೆ.