ಮುದಲೆಮಾರು ಪ್ರಹ್ಲಾದ ರೈ ನಿಧನ

Update: 2023-08-03 17:34 GMT

ಕೊಣಾಜೆ: ಹರೇಕಳ‌ ಗ್ರಾಮದ ಮುದಲೆಮಾರು ಪ್ರಹ್ಲಾದ ರೈ (86) ಅವರು ಹೃದಯಘಾತದಿಂದ ಗುರುವಾರ ‌ನಿಧನರಾದರು.

ಇವರು ಹಲವಾರು ವರ್ಷಗಳಿಂದ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಪಾವೂರು ಹರೇಕಳ ಮತ್ತು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ, ಪಾವೂರು ಹರೇಕಳ ತ್ರಿಶಕ್ತಿ ವಿದ್ಯಾವರ್ಧಕ ಸಂಘ ಇದರ ಅಧ್ಯಕ್ಷರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದರು.

ಹರೇಕಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿ, ನೇತ್ರಾವತಿ ಸಹಕಾರಿ ಸಂಘದ ನಿರ್ದೇಶಕರಾಗಿ,ಹರೇಕಳ ಗ್ರಾಮದ ಬಂಟರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಇವರು ಪತ್ನಿ, ಒಂದು ಹೆಣ್ಣು, ಇಬ್ಬರು ಗಂಡು ಮಕ್ಕಳು ಮತ್ತು ನಾಲ್ಕು ಮಂದಿ ಮೊಮ್ಮಕ್ಕಳನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹರಿಶ್ಚಂದ್ರ
ವಿಮಲ ಭಟ್
ಕಮಲಾಕ್ಷ
ಹಮೀದ್ ಹಾಜಿ