ಅಪ್ಪು ಆಚಾರ್ಯ
Update: 2023-10-01 16:37 GMT
ಮಂಗಳೂರು: ರಾಯಿ ಗ್ರಾಮದ ಸಾಲುಕೋಡಿ ನಿವಾಸಿ, ಹಿರಿಯ ಕಾಷ್ಠಶಿಲ್ಪಿ ಅಪ್ಪು ಆಚಾರ್ಯ ರಾಯಿ(82) ಹೃದಯಾಘಾತದಿಂದ ರವಿವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ ಪತ್ನಿ, ಪುತ್ರ ರಾಯಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ ಆಚಾರ್ಯ ರಾಯಿ ಸಹಿತ ಐವರು ಪುತ್ರಿಯರು ಇದ್ದಾರೆ. ಪ್ರಗತಿಪರ ಕೃಷಿಕರಾಗಿ, ಹಿರಿಯ ಕಾಷ್ಠಶಿಲ್ಪಿಯಾಗಿ, ಸರಳ ಸಜ್ಜನಿಕೆಯಿಂದಲೇ ಗುರುತಿಸಿಕೊಂಡಿದ್ದರು.