ಐತಪ್ಪಪೂಜಾರಿ
Update: 2023-10-22 16:16 GMT
ಮಂಗಳೂರು, ಅ.22: ಗುರುಪುರ ಸಮೀಪದ ಅಲೈಗುಡ್ಡೆ ಅಹಲ್ಯಾವನ ನಿವಾಸಿ ಐತಪ್ಪಪೂಜಾರಿ (80) ರವಿವಾರ ಬೆಳಗ್ಗೆ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.
ಮೃತರು ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.
ಗುರುಪುರ ಬಿಲ್ಲವ ಸಮಾಜ ಸೇವಾ ಸಂಘ(ರಿ)ದಲ್ಲಿ 35 ವರ್ಷದಿಂದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಸಂಘದ ಸ್ಥಾಪಕ ಸದಸ್ಯರೂ ಆಗಿದ್ದರು.