ಯು.ಟಿ. ಮೊಯ್ದೀನ್
Update: 2023-11-08 16:29 GMT
ಉಪ್ಪಿನಂಗಡಿ: 34 ನೆಕ್ಕಿಲಾಡಿಯ ನಿವಾಸಿ, ವರ್ತಕ ಯು.ಟಿ. ಮೊಯ್ದೀನ್ (62) ಹೃದಯಾಘಾತದಿಂದ ನ.8ರಂದು ಸಂಜೆ ನಿಧನರಾದರು.
ನೆಕ್ಕಿಲಾಡಿಯಲ್ಲಿರುವ ಯು.ಟಿ. ದಿನಸಿ ಅಂಗಡಿಯಲ್ಲಿದ್ದ ವೇಳೆ ಇವರಿಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಇವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.