ಮೆಲ್ಕಾರ್: ಗುಡ್ಡೆಯಂಗಡಿ ರತ್ನಣ್ಣ ನಿಧನ
Update: 2023-11-16 08:10 GMT
ಬಂಟ್ವಾಳ : ಮೆಲ್ಕಾರ್ ಸಮೀಪದ ಬೋಳಂಗಡಿ ಗುಡ್ಡೆಯಂಗಡಿ ನಿವಾಸಿ ರತ್ನಾಕರ (69) ಅವರು ಅಸೌಖ್ಯದಿಂದ ಸ್ವಗೃಹದಲ್ಲಿ ನವೆಂಬರ್ ಬುಧವಾರ ನಿಧನರಾದರು.
ಮೆಲ್ಕಾರ್ ಪಾರ್ಕ್ ನಲ್ಲಿ ರಿಕ್ಷಾ ಚಾಲಕರಾಗಿದ್ದ ಅವರು ಹತ್ತು ವರ್ಷಕ್ಕೂ ಅಧಿಕ ಕಾಲ ರಿಕ್ಷಾ ಚಾಲಕರಾಗಿ ದುಡಿದಿದ್ದರು. ಪರಿಸರದವರ ಮಧ್ಯೆ “ರತ್ನಣ್ಣ” ಎಂದೇ ಹೆಸುವಾಸಿಯಾಗಿದ್ದರು.
ಮೃತರು ಪತ್ನಿ , ಓರ್ವ ಪುತ್ರಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.