ಕೃಷ್ಣ ಅಂಚನ್
Update: 2023-12-01 15:31 GMT
ಮಂಗಳೂರು, ಡಿ.1: ವೃತ್ತಿಯಲ್ಲಿ ಬಸ್ ಮತ್ತು ರಿಕ್ಷಾ ಚಾಲಕನಾಗಿದ್ದ ಹಾಗೂ ಕಾರ್ಮಿಕ ಪರಿಷತ್ ಮುಖಂಡರಾಗಿದ್ದ ಕೃಷ್ಣಾಪುರದ ಕೃಷ್ಣ ಡಿ. ಅಂಚನ್ (52) ಶುಕ್ರವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ಮತ್ತು ಒಬ್ಬ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸುಮಾರು 35 ವರ್ಷಗಳ ಕಾಲ ಚಾಲಕನಾಗಿದ್ದ ಇವರು ಕಾರ್ಮಿಕ ಪರಿಷತ್ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ದ.ಕ.ಜಿಲ್ಲಾ ಕಾರ್ಮಿಕ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
*ಸಂತಾಪ: ವಿಧಾನ ಪರಿಷತ್ ಮಾಜಿ ಸದಸ್ಯ, ಕಾರ್ಮಿಕ ಪರಿಷತ್‌ನ ಗೌರವಾಧ್ಯಕ್ಷ ಐವನ್ ಡಿಸೋಜ ತೀವ್ರ ಸಂತಾಪ ಸೂಚಿಸಿದ್ದಾರೆ.