ಗುರುಪ್ರಸಾದ್ ರೈ ಕುದ್ಕಾಡಿ

Update: 2023-12-09 16:02 GMT

ಪುತ್ತೂರು: ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಕುದ್ಕಾಡಿ ನಿವಾಸಿ ಗುರುಪ್ರಸಾದ್ ರೈ ಕುದ್ಮಾಡಿ(45) ಎಂಬವರು ಶನಿವಾರ ರಾತ್ರಿ ನಿಧನರಾದರು.

ಶುಕ್ರವಾರ ಸಂಜೆ ಮೈಂದನಡ್ಕದಲ್ಲಿ ನಡೆದಿದ್ದ ವಾಲಿಬಾಲ್ ಪಂದ್ಯಾಟವೊಂದರಲ್ಲಿ ಭಾಗವಹಿಸಿ ರಾತ್ರಿ ಮನೆಗೆ ಹೋಗಿದ್ದ ಅವರು ಅಸ್ವಸ್ಥರಾಗಿದ್ದರು. ಶನಿವಾರ ಬೆಳಗ್ಗೆ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ 7 ಗಂಟೆ ಸುಮಾರಿಗೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಬಡಗನ್ನೂರು ಗ್ರಾಮ ಪಂಚಾಯತ್‌ನ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಒಂದು ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ಇವರು, ಕೋಟಿ ಚೆನ್ನಯ ಯುವಕ ಮಂಡಲ ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಚಿರಪರಿಚಿತರಾಗಿದ್ದರು. ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರೂ ಆಗಿದ್ದರು.

ಮೃತರು ತಾಯಿ, ಸಹೋದರ, ಸಹೋದರಿ ಹಾಗು ಬಂಧುಬಳಗವನ್ನು ಅಗಲಿದ್ದಾರೆ. ಕೆಲ ತಿಂಗಳ ಹಿಂದೆ ಗುರುಪ್ರಸಾದ್ ರೈ ಕುದ್ಮಾಡಿ ಅವರ ಮನೆಗೆ ದರೋಡೆಕೋರರು ನುಗ್ಗಿ ತಾಯಿ, ಮಗನನ್ನು ಕಟ್ಟಿ ಹಾಕಿ ನಗದು, ಚಿನ್ನಾಭರಣ ದರೋಡೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ವಿಮಲ ಭಟ್
ಕಮಲಾಕ್ಷ
ಹಮೀದ್ ಹಾಜಿ