ಡಾ. ಶಶಿಕಲ ಎಚ್.ಎಂ.

Update: 2023-12-12 14:04 GMT

ಉಡುಪಿ, ಡಿ.12: ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರಾಗಿದ್ದ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿಯ ಸದಸ್ಯೆ ಡಾ.ಶಶಿಕಲ ಎಚ್.ಎಂ. (61) ಇತ್ತೀಚೆಗೆ ಹೆಬ್ರಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಐಎಂಎ ವತಿಯಿಂದ ಡಾ.ಶಶಿಕಲ ಅವರಿಗೆ ಶೃದ್ಧಾಂಜಲಿ ಸಭೆಯು ಅಜ್ಜರಕಾಡಿನಲ್ಲಿರುವ ಐಎಂಎ ಭವನದಲ್ಲಿ ನಡೆಯಿತು. ಜಿಲ್ಲಾಸ್ಪತ್ರೆಯ ಮನೋರೋಗ ತಜ್ಞರಾದ ಡಾ.ವಾಸುದೇವ್ ಎಸ್. ಪ್ರಾಸ್ತಾವಿಕ ಮಾತುಗಳನ್ನಾಡಿ ಡಾ.ಶಶಿಕಲ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು. ಐಎಂಎ ಉಡುಪಿ-ಕರಾವಳಿಯ ಸದಸ್ಯರು, ಇತರ ವೈದ್ಯಮಿತ್ರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ವಿಮಲ ಭಟ್
ಕಮಲಾಕ್ಷ
ಹಮೀದ್ ಹಾಜಿ