ಯುಕೆ ಅಬ್ದುಲ್ಲಾ ಕೊಟ್ಟಾರ
Update: 2023-12-18 16:35 GMT
ಮಂಗಳೂರು, ಡಿ.18: ಉಳ್ಳಾಲ ಕೊಟ್ಟಾರ ನಿವಾಸಿ ಯುಕೆ ಅಬ್ದುಲ್ಲಾ ಕೊಟ್ಟಾರ(65) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.
ಅವರು ಪತ್ನಿ ,ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಉಳ್ಳಾಲ ಪೇಟೆ ರಹ್ಮಾನಿಯಾ ಜುಮಾ ಮಸೀದಿ ಕಮಿಟಿಯಲ್ಲಿ ಸುದೀರ್ಘ ಕಾಲ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅವರ ನಿಧನಕ್ಕೆ ಬಸ್ತಾನುಲ್ ಉಲೂಂ ಯೂತ್ ಅಸೋಸಿಯೇಷನ್ ತೀರ್ವ ಸಂತಾಪ ವ್ಯಕ್ತಪಡಿಸಿದೆ.