ಕೆ.ಪಿ. ಅಬ್ದುಲ್ಲಾ ಮುಸ್ಲಿಯಾರ್
Update: 2024-01-27 14:28 GMT
ಮಂಗಳೂರು: ಉಳ್ಳಾಲ ಮುಕ್ಕಚೇರಿಯ ಕೆ.ಪಿ. ಅಬ್ದುಲ್ಲಾ ಮುಸ್ಲಿಯಾರ್ ಉಳ್ಳಾಲ (71) ಶನಿವಾರ ತನ್ನ ಸ್ವಗೃಹದಲ್ಲಿ ನಿಧನರಾದರು.
ಮೂವರು ಪುತ್ರಿಯರು ಮತ್ತು ಆರು ಮಂದಿ ಪುತ್ರರ ಸಹಿತ ಅಪಾರ ಬಂಧು ಬಳಗವನ್ನು ಮೃತರು ಅಗಲಿದ್ದಾರೆ.
ಮೇಲಂಗಡಿಯ ಕಂಝುಲ್ ಉಳೂಮ್ ಮದ್ರಸ ಸಹಿತ ಉಳ್ಳಾಲದ ಹಲವಾರು ಮದ್ರಸಾಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ನೂರಾರು ಮಕ್ಕಳ ಪ್ರೀತಿಯ ಗುರುವಾಗಿದ್ದರು.