ಅಶೋಕ್ ಬಂಗೇರ
Update: 2024-01-27 15:52 GMT
ಮಂಗಳೂರು: ಇಲ್ಲಿನ ಪದವಿನಂಗಡಿ ಸಮೀಪದ ಗಂಧಕಾಡು ನಿವಾಸಿ ಪದವಿನಂಗಡಿ ಶ್ರೀ ಕೊರಗಜ್ಜ ಕ್ಷೇತ್ರದ ದೈವಾರಾಧಕ ಅಶೋಕ್ ಬಂಗೇರ ಅವರು ಶನಿವಾರ ನಿಧನ ಹೊಂದಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು.
ಮೃತರು ತಾಯಿ, ಭಟ್ರಕುಮೇರು ಶ್ರೀ ಕೊರಗತನಿಯ ಕ್ಷೇತ್ರದ ದೈವಾರಾಧಕ ಭಾಸ್ಕರ್ ಬಂಗೇರ ಸೇರಿದಂತೆ ಐದು ಮಂದಿ ಸಹೋದರರು, ಪತ್ನಿ ಹಾಗೂ ಮೂವರು ಪುತ್ರಿಯರು ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.