ಅಬ್ದುಲ್ ಖಾದರ್ ಬಾರ್ಪಣೆ
Update: 2024-02-13 14:31 GMT
ಸುಳ್ಯ ಗಾಂಧಿನಗರದ ಗಾರ್ಡ್ ಶೆಡ್ಡ್ ನಿವಾಸಿ ಅಬ್ದುಲ್ ಖಾದರ್ (65) ಅವರು ಹೃದಯಾಘಾತದಿಂದ ಮಂಗಳವಾರ ನಿಧನರಾದರು.
ಬೆಳಿಗ್ಗೆ ಮನೆಯಲ್ಲಿ ಇರುವ ವೇಳೆ ಎದೆನೋವು ಕಾಣಿಸಿಕೊಂಡ ಅವರನ್ನು ತಕ್ಷಣವೇ ಸುಳ್ಯ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯುತ್ತಿರುವಾಗ ದಾರಿ ಮಧ್ಯೆ ಕೊನೆಯುಸಿರೆಳೆದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.