ಎ.ಅನಂತಕೃಷ್ಣ ಕೊಡ್ಗಿ
Update: 2024-02-17 15:02 GMT
ಕುಂದಾಪುರ: ಕುಂದಾಪುರದ ಮಾಜಿ ಶಾಸಕ ದಿ.ಎ.ಜಿ.ಕೊಡ್ಗಿ ಅವರ ಕಿರಿಯ ಸಹೋದರ, ಹಾಲಿ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಅವರ ಚಿಕ್ಕಪ್ಪ ಹಾಗೂ ಇಲ್ಲಿನ ಅಜಂತಾ ಪ್ರೆಸ್‌ನ ಮಾಲಕರಾದ ಎ.ಅನಂತಕೃಷ್ಣ ಕೊಡ್ಗಿ (72) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.
ಹಲವು ಸಾಮಾಜಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಕೊಡ್ಗಿ, ಕುಂದಾಪುರ ಲಯನ್ಸ್ ಕ್ಲಬ್, ಬೋರ್ಡ್ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕುಂದಾಪುರ ತಾಲೂಕು ಬಿಜೆಪಿಯ ಖಜಾಂಚಿಯಾಗಿದ್ದ ಕೊಡ್ಗಿ ಸ್ಥಳೀಯವಾಗಿ ಜನಪ್ರಿಯರಾಗಿದ್ದರು.
ಕೊಡ್ಗಿ ಅವರು ಪತ್ನಿ ಹಾಗೂ ಪುತ್ರ ಅಲ್ಲದೇ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಅಮಾಸೆಬೈಲು ಮಚ್ಚಟ್ಟು ಗ್ರಾಮದ ಮೂಲ ಮನೆಯಲ್ಲಿ ನೆರವೇರಿಸಲಾಯಿತು.