ಫಾತಿಮಾ
Update: 2024-03-13 13:05 GMT
ಮಂಗಳೂರು: ಮೂಲತಃ ಕುಳಾಯಿಯ ಪ್ರಸಕ್ತ ಕುತ್ತಾರ್ ಸಮೀಪದ ಮದನಿ ನಗರ ನಿವಾಸಿ ಅಬ್ದುಲ್ ಖಾದರ್‌ರ ಪತ್ನಿ ಫಾತಿಮಾ (70) ಬುಧವಾರ ಬೆಳಗ್ಗೆ ತನ್ನ ಸ್ವಗೃಹದಲ್ಲಿ ನಿಧನರಾದರು.
ಪತಿ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ದ.ಕ.ಜಿಲ್ಲಾ ಸಂಚಾಲಕ, ವಿಬ್ರೋ ಗ್ರಾಫಿಕ್ಸ್ ಮಾಲಕ ಅಬ್ದುಲ್ ಗಫೂರ್ ಕುಳಾಯಿ ಸಹಿತ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ಬುಧವಾರ ಸಂಜೆ ಮಂಗಳೂರಿನ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ಆವರಣದಲ್ಲಿ ದಫನ ಕಾರ್ಯ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.