ಟಿ.ಕೃಷ್ಣಪ್ಪ
Update: 2024-03-19 16:04 GMT
ಉಡುಪಿ, ಮಾ.19: ನಂಬರ್ ಓನ್ ಬೀಡಿಯ ಮಾರ್ಕಿನ ಮಾಲಕ ತಾಂಗದಗಡಿ ನಿವಾಸಿ ಟಿ.ಕೃಷ್ಣಪ್ಪ(78) ಇಂದು ನಸುಕಿನ ವೇಳೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಸುಮಾರು 51 ವರ್ಷಗಳಿಂದ ಮಾರುಕಟ್ಟೆಗೆ ಬೀಡಿ ಒದಗಿಸುತ್ತಿದ್ದ ಟಿ.ಕೃಷ್ಣಪ್ಪ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.