ಸೋಮಪ್ಪ ಮೂಲ್ಯ
ಮಂಗಳೂರು, ಎ.11: ದ.ಕ.ಜಿಲ್ಲೆಯಲ್ಲಿ ಹಲವು ಪತ್ರಿಕೆಗಳಿಗೆ ಮಾರಾಟ ಉತ್ತೇಜಕರಾಗಿ (ಪ್ರಚಾರಕ) ಸೇವೆ ಸಲ್ಲಿಸಿದ್ದ ಸೋಮಪ್ಪ ಮೂಲ್ಯ ಕಟ್ಟೆ (77) ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಮೈಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.
ಮೂಲತ: ವಿಟ್ಲದ ನಿವಾಸಿ ಸೋಮಪ್ಪ ಮೂಲ್ಯ ಕಟ್ಟೆ (ಎಸ್.ಎಂ.ಕಟ್ಟೆ) ಅವರು ಕಳೆದ ಕೆಲವು ವರ್ಷಗಳಿಂದ ಮೈಸೂರಿನಲ್ಲಿ ಮಗಳ ಮನೆಯಲ್ಲಿ ವಾಸವಾಗಿದ್ದರು. ಅವರು ಪತ್ನಿ ,ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತದೇಹದ ಅಂತ್ಯಸಂಸ್ಕಾರವನ್ನು ಹುಟ್ಟೂರು ವಿಟ್ಲ ದಲ್ಲಿ ನೆರವೇರಿಸಲಾಯಿತು.
ಧಾರ್ಮಿಕ ಸಾಮಾಜಿಕ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ಸ್ಥಾಪಕ ಸದಸ್ಯ ರಾಗಿ ಹಲವಾರು ವರ್ಷಗಳ ಕಾಲ ದುಡಿದಿದ್ದರು.
ಗುಜರಾತ್‌ನ ಅಮುಲ್ ಸಂಸ್ಥೆಯಲ್ಲಿ ಕೆಲವು ವರ್ಷಗಳ ಉದ್ಯೋಗದಲ್ಲಿದ್ದ ಸೋಮಪ್ಪ ಅವರು ಮುಂಗಾರು, ಸುದ್ದಿ ಬಿಡುಗಡೆ, ಸಂಯುಕ್ತ ಕರ್ನಾಟಕ , ಪ್ರಜಾವಾಣಿ ಪತ್ರಿಕೆ ಗಳಲ್ಲಿ ಮಾರಾಟ ಉತ್ತೇಜಕರಾಗಿ ಹಲವಾರು ವರ್ಷಗಳ ಕಾಲ ದುಡಿದಿದ್ದರು. ಮಂಗಳೂರಿನಲ್ಲಿ ಪತ್ರಿಕಾ ಏಜೆಂಟ ರಾಗಿಯೂ ಇದ್ದರು.