ಅಶ್ರಫ್ ಕರಾವಳಿ

Update: 2024-11-15 16:37 GMT
ಅಶ್ರಫ್ ಕರಾವಳಿ
  • whatsapp icon

ಬಂಟ್ವಾಳ: ಮಾಣಿ ಸಮೀಪದ ಬುಡೋಳಿ ನಿವಾಸಿ ಅಶ್ರಫ್ ಕರಾವಳಿ (52) ಹೃದಯಾಘಾತದಿಂದ ಶುಕ್ರವಾರ ಮಧ್ಯಾಹ್ನ ನಿಧನರಾಗಿದರು.

ಅಶ್ರಫ್ ಅವರು ಶುಕ್ರವಾರದ ನಮಾಝಿಗೆ ಗಡಿಯಾರ ಮಸೀದಿಗೆ ತೆರಳಿದ್ದು, ನಮಾಝ್ ನಿರ್ವಹಿಸಿ ಮಸೀದಿಯಲ್ಲಿ ಕುಳಿತಿದ್ದ ವೇಳೆ ಹೃದಯಾಘಾತ ಸಂಭವಿಸಿತ್ತು. ತಕ್ಷಣ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಅಶ್ರಫ್ ಅವರು ಬುಡೋಳಿ ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾಗಿದ್ದು ಗಡಿಯಾರ ಜುಮಾ ಮಸೀದಿ, ಕಲ್ಲಡ್ಕ ರೇಂಜ್ ಮದ್ರಸ ಮೆನೇಜರ್ ಮೆಂಟ್ ಇದರ ಕಾರ್ಯದರ್ಶಿಯಾಗಿ ಹಾಗೂ ಇನ್ನಿತರ ಧಾರ್ಮಿಕ, ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು, ತಂದೆ ಸಹಿತ 7 ಮಂದಿ ಸಹೋದರರು, ಓರ್ವ ಸಹೋದರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ವಿಮಲ ಭಟ್
ವಿಮಲ ಭಟ್
ಕಮಲಾಕ್ಷ
ಹಮೀದ್ ಹಾಜಿ