ಜಾರ್ಜ್ ನೊರೋನ್ನಾ
Update: 2025-02-02 20:38 IST

ಉಪ್ಪಿನಂಗಡಿ: ಲೋಕೋಪಯೋಗಿ ಇಲಾಖೆಯ ನಿವೃತ್ತ ವರ್ಕ್ ಇನ್ಸ್‍ಪೆಕ್ಟರ್, ಉಪ್ಪಿನಂಗಡಿ ರಾಮನಗರ ನಿವಾಸಿ ಜಾರ್ಜ್ ನೊರೋನ್ನಾ (80) ಕೆಲ ದಿನಗಳ ಅನಾರೋಗ್ಯದಿಂದ ಫೆ. 2ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಜಾರ್ಜ್ ನೊರೋನ್ನಾರವರು ಉಪ್ಪಿನಂಗಡಿ ರೋಟರಿ ಕ್ಲಬ್‍ನಲ್ಲಿ 2 ಬಾರಿ ಅಧ್ಯಕ್ಷರಾಗಿ, ಉಪ್ಪಿನಂಗಡಿ ಚರ್ಚ್ ಪಾಲನಾ ಸಮಿತಿ ಅಧ್ಯಕ್ಷರಾದಿಯಾಗಿ ಹಲವಾರು ಸಂಘ ಸಂಸ್ಥೆಯಲ್ಲಿ ಗುರುತಿಸಿಕೊಂಡು ಚಿರಪರಿಚಿತರಾಗಿದ್ದರು.
ಮೃತರು ಪುತ್ರರಾದ ವಿಜಿ ಅಲೆಕ್ಸಾಂಡರ್, ಪ್ರಸಾದ್ ನೊರೋನ್ನಾ, ಪುತ್ರಿಯರಾದ ಝೀಟಾ ನೊರೋನ್ನಾ, ರೂಪಾಂಜಲಿಯವರನ್ನು ಅಗಲಿದ್ದಾರೆ.