ರಾಮದಾಸ್ ನಿಧನ
Update: 2023-09-09 14:24 GMT
ಮಂಗಳೂರು, ಸೆ.9: ಬೈಕಂಪಾಡಿ ಸಮೀಪದ ಹೊಸಬೆಟ್ಟು ವಿದ್ಯಾನಗರ ನಿವಾಸಿ ವಿ.ರಾಮದಾಸ್(84) ಶುಕ್ರವಾರ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ನವಮಂಗಳೂರು ಬಂದರು ಮಂಡಳಿಯಲ್ಲಿ ಹಿರಿಯ ಅಧೀಕ್ಷಕರಾಗಿ ನಿವೃತ್ತರಾಗಿದ್ದ ಇವರು ರಾಮಕ್ಷತ್ರಿಯ ಸೇವಾ ಸಂಘದ ಸದಸ್ಯರಾಗಿದ್ದರು.