ಮುಹಮ್ಮದ್ ಸಲೀಂ (ಚೆಲ್ಲಿ)
Update: 2023-07-09 17:37 GMT
ಮಂಗಳೂರು : ನಗರದ ಬಂದರ್ ಕಸಾಯಿಗಲ್ಲಿ ನಿವಾಸಿ, ಸಮಾಜ ಸೇವಕ ಮತ್ತು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ ಮುಹಮ್ಮದ್ ಸಲೀಂ ಯಾನೆ ಚೆಲ್ಲಿ (53) ಹೃದಯಾಘಾತದಿಂದ ರವಿವಾರ ಸಂಜೆ ನಿಧನರಾಗಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಜು.10ರಂದು ಬೆಳಗ್ಗೆ 8.30ರ ಸುಮಾರಿಗೆ ಕೇಂದ್ರ ಜುಮಾ ಮಸೀದಿ ಬಂದರ್ ನಲ್ಲಿ ಮೃತರ ದಫನ ಕಾರ್ಯ ಮಾಡಲಾಗುವುದು ಎಂದು ಮಾಜಿ ಮೇಯರ್ ಕೆ.ಅಶ್ರಫ್ ಅವರು ತಿಳಿಸಿದ್ದಾರೆ.