ಎಸ್.ಎಂ. ಇಕ್ಬಾಲ್ ನಿಧನ
Update: 2023-09-17 16:48 GMT
ಮಂಗಳೂರು, ಸೆ.17: ನಗರದ ಅತ್ತಾವರ ಕಾಪ್ರಿಗುಡ್ಡ ನಿವಾಸಿ, ತಾಜ್ ಸೈಕಲ್ ಕಾರ್ಪೊರೇಷನ್‌ನ ಮಾಲಕ ಎಸ್.ಎಂ. ಇಕ್ಬಾಲ್ (72) ಅಲ್ಪಕಾಲದ ಅಸೌಖ್ಯದಿಂದ ರವಿವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸೋಮವಾರ ಮಧ್ಯಾಹ್ನ ಕುದ್ರೋಳಿಯ ಜಾಮಿಯಾ ಮಸ್ಜಿದ್ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.