ಸುಂದರಿ ಶೆಟ್ಟಿ ನಿಧನ
Update: 2023-07-25 13:28 GMT
ಉಡುಪಿ, ಜು. 25: ತುಳು ಮತ್ತು ಕನ್ನಡ ಜಾನಪದ ವಿದ್ವಾಂಸ, ಸಂಶೋಧಕ ಹಾಗೂ ನಿವೃತ್ತ ಪ್ರಾಂಶುಪಾಲ ಡಾ. ಗಣನಾಥ ಶೆಟ್ಟಿ ಎಕ್ಕಾರು ಇವರ ತಾಯಿ ಸುಂದರಿ ಶೆಟ್ಟಿ ಸೋಮವಾರ ರಾತ್ರಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಪ್ರಸೂತಿ ತಜ್ಞೆಯಾಗಿ 70ಕ್ಕೂ ಹೆಚ್ಚು ನೈಸರ್ಗಿಕ ಹೆರಿಗೆಗಳನ್ನು ಮಾಡಿರುವ ಸುಂದರಿ ಶೆಟ್ಟಿ ಅವರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.