ವಾಸುದೇವ ಖಾರ್ವಿ
Update: 2023-07-14 14:03 GMT
ಕುಂದಾಪುರ : ತಲ್ಲೂರು ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯ ವಾಸುದೇವ ಖಾರ್ವಿ(61) ತಲ್ಲೂರು ಕೋಟೆಬಾಗಿಲಿನಲ್ಲಿರುವ ತಮ್ಮ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ಕಳೆದ ರಾತ್ರಿ ನಿಧನರಾದರು.
ಮೀನುಗಾರಿಕಾ ವೃತ್ತಿಯಲ್ಲಿದ್ದ ಅವರು ಸಮಾಜ ಸೇವೆಯಲ್ಲೂ ಗುರ್ತಿಸಿ ಕೊಂಡಿದ್ದರು. ಮೃತರು ಪತ್ನಿ ಓರ್ವ ಪುತ್ರಿ ಹಾಗೂ ಮಾಜಿ ಗ್ರಾಪಂ ಸದಸ್ಯ ಸುನೀಲ್ ಖಾರ್ವಿ ಸಹಿತ ಇಬ್ಬರು ಪುತ್ರರನ್ನು ಅಗಲಿದ್ದಾರೆ.