ವಿಜಯ ಕುಮಾರ್ ಭಟ್ ನಿಧನ
Update: 2023-09-16 16:55 GMT
ಮಂಗಳೂರು, ಸೆ.16: ಅವಿಭಜಿತ ದ.ಕ. ಜಿಲ್ಲೆಯ ಹಲವು ಪ್ರಸಿದ್ಧ ದೇವಾಲಯಗಳು, ಮಂದಿರಗಳು, ದೈವಸ್ಥಾನಗಳ ವಾರ್ಷಿಕ ಜಾತ್ರೆ, ಬ್ರಹ್ಮಕಲಶ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಅನ್ನಸಂತರ್ಪಣೆಯ ಪಾಕ ತಯಾರಿ ಸುವ ಬಾಣಸಿಗ ಆದ್ಯಪಾಡಿಯ ವಿಜಯ ಕುಮಾರ್ ಭಟ್ (61) ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಡಾ.ಭರತ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರಾದ ಕೃಷ್ಣಮೂರ್ತಿ, ಗೋಪಾಲ ಕುತ್ತಾರ್, ಹೆಚ್.ಕೆ. ಪುರುಷೋತ್ತಮ್, ಮನೋಹರ್ ಸುವರ್ಣ, ಭುಜಂಗ ಕುಲಾಲ್, ಕಾರ್ತಿಕ್, ಶೆಡ್ಡೆ ಮಂಜುನಾಥ್ ಭಂಡಾರಿ ಮತ್ತಿತರರು ಮೃತರ ಅಂತಿಮ ದರ್ಶನ ಪಡೆದರು.