ಮೂರು ಉಪ ಚುನಾವಣೆಗಳ ಬಳಿಕ ಬಿಜೆಪಿಗರು ಪ್ರತಿಭಟನೆ ಮುಗಿಸಿ ಮನೆಗೆ ಹೋಗ್ತಾರೆ: ಸಚಿವ ಶಿವಾನಂದ ಪಾಟೀಲ್
ಹುಬ್ಬಳ್ಳಿ: ಬಿಜೆಪಿಯವರು ಹಣದ ಮೇಲೆ ಚುನಾವಣೆ ಮಾಡುತ್ತಿದ್ದಾರೆ. ಮೂರು ಉಪಚುನಾವಣೆ ಮುಗಿದ ನಂತರ ಬಿಜೆಪಿ ಪ್ರತಿಭಟನೆ ಮುಗಿಯುತ್ತೆ, ಮನೆಗೆ ಹೋಗ್ತಾರೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ನೂರಕ್ಕೆ ನೂರರಷ್ಟು ಕೆಲಸ ಮಾಡಲ್ಲ. ಜನ ಬಿಜೆಪಿ ಹಣ ತಗೊಂಡು ಕಾಂಗ್ರೆಸ್ ಗೆ ಮತ ಹಾಕ್ತಾರೆ. ನಮ್ಮ ಪಕ್ಷದಲ್ಲಿ ಸಾಮರಸ್ಯ ಇದೆ. ಆದರೆ ಬಿಜೆಪಿಯಲ್ಲಿ ಇಲ್ಲ. ಈ ಬಾರಿ ಕಾಂಗ್ರೆಸ್ ಖಂಡಿತ ಗೆದ್ದೇ ಗೆಲ್ಲುತ್ತೆ ಎಂಬುವುದರಲ್ಲಿ ಎರಡು ಮಾತಿಲ್ಲ ಎಂದರು
ಕಾಂಗ್ರೆಸ್ ಎಂದಿಗೂ ರೈತರ ವಿರೋಧಿ ಅಲ್ಲ. ವಕ್ಫ್ ವಿಚಾರದಲ್ಲಿ ಕಾಂಗ್ರೆಸ್ ತಪ್ಪು ಮಾಡಿಲ್ಲ. ಹಾಗಿದ್ದಲ್ಲಿ ಕಾಂಗ್ರೆಸ್ 22 ಲಕ್ಷ ಎಕರೆ ಜಮೀನನ್ನು ದೇವರಾಜ ಅರಸ್ ಇದ್ದಾಗ ರಾಜ್ಯದ ಜನರಿಗೆ ಕೊಡ್ತಾ ಇರ್ಲಿಲ್ಲ. ಈ ಹಿಂದೆ ಬಿಜೆಪಿ ಕೊಟ್ಟ ನೋಟಿಸ್ ಮುಂದುವರೆಯುತ್ತಿದೆ ಅಷ್ಟೇ. ನೀವು ಹೇಗೆ ಕಾಂಗ್ರೆಸ್ ರೈತ ವಿರೋಧಿ ಅಂತ ಹೇಳುತ್ತೀರಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.