ಬೆಂಗಳೂರಲ್ಲಿ ಪಾಕಿಸ್ತಾನಿ ಪ್ರಜೆಗಳು ಪತ್ತೆಯಾಗಲು ಕೇಂದ್ರದ ವೈಫಲ್ಯವೇ ಕಾರಣ: ಗೃಹ ಸಚಿವ ಜಿ. ಪರಮೇಶ್ವರ್
ಹುಬ್ಬಳ್ಳಿ: ಬೆಂಗಳೂರಲ್ಲಿ ಪಾಕಿಸ್ತಾನಿ ಪ್ರಜೆಗಳು ಪತ್ತೆಯಾಗಲು ಕೇಂದ್ರದ ವೈಫಲ್ಯವೇ ಕಾರಣ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಹತ್ತಿರ ಅನೇಕ ಡಿಪಾರ್ಟ್ಮೆಂಟ್ ಗಳಿವೆ. ಇದನ್ನು ಕೇಂದ್ರ ಸರ್ಕಾರದವರು ಗಮನದಲ್ಲಿಟ್ಟುಕೊಳ್ಳಬೇಕು. ವಿದೇಶಿಗರು ಬೆಂಗಳೂರಿಗೆ ಬಂದು ಪಾಸ್ ಪೋರ್ಟ್ ಮಾಡಿಸಿಕೊಳ್ಳುತ್ತಾರೆ. ಸೆಂಟ್ರಲ್ ಏಜೆನ್ಸಿ ಎಲ್ಲೋ ಒಂದು ಕಡೆ ಫೇಲ್ ಆಗಿದೆ. ನಮಗೆ ಗೊತ್ತಾದ ಮೇಲೆ ನಮ್ಮವರು ಅವರನ್ನು ಅರೆಸ್ಟ್ ಮಾಡಿದ್ದಾರೆ. ಕರ್ನಾಟಕ ಪೊಲೀಸ್ ಸಮರ್ಥರಿದ್ದಾರೆ, ಉಳಿದವರನ್ನು ಹುಡುಕುತ್ತೇವೆ ಎಂದು ಹೇಳಿದರು.
ಜಾತಿ ಗಣತಿ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡುತ್ತೇವೆ. ಮುಖ್ಯಮಂತ್ರಿಗಳು ಈಗಾಗಲೇ ಹೇಳಿದ್ದಾರೆ. ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತೇ ಅಂತ ಆ ಮೇಲೆ ತೀರ್ಮಾನ ಆಗುತ್ತೆ ಎಂದರು.
ಜಿ ಟಿ ದೇವೇಗೌಡ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, "ಅವರು ಮಾತನಾಡಿದ್ದು ಎಫ್ಐಆರ್ ಗೆ ರಾಜೀನಾಮೆ ಕೊಡೋದಾದ್ರೆ, ಎಲ್ಲರೂ ಕೊಡಬೇಕು ಅಂತ ಹೇಳಿದ್ದಾರೆ. ಹಾಗಂತ ಕಾಂಗ್ರೆಸ್ ಗೆ ಬರ್ತಾರೆ ಅಂದ್ರೆ ಹೇಗೆ..? ಅದರ ಬಗ್ಗೆ ನನಗೆ ಗೊತ್ತಿಲ್ಲ, ಅಷ್ಟು ಹೇಳಿದಕ್ಕೆ ಕಾಂಗ್ರೆಸ್ ಗೆ ಬರ್ತಾರೆ ಅನ್ನೋದು ಸರಿಯಲ್ಲ ಎಂದರು.
ಮಲ್ಲಿಕಾರ್ಜುನ ಖರ್ಗೆ ಸಿಎಂ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ ಎಂದರು.