ಪಾಕ್ ಪರ ಘೋಷಣೆ ಕೂಗಿದವರನ್ನು ಸಮರ್ಥಿಸಿಕೊಂಡಿಲ್ಲ, ನಾವು ಅವರನ್ನು ಜೈಲಿಗೆ ಕಳುಹಿಸಿದ್ದೇವೆ : ಸಚಿವ ರಾಮಲಿಂಗಾರೆಡ್ಡಿ

Update: 2024-03-06 09:39 GMT

ಹುಬ್ಬಳ್ಳಿ: ಪಾಕ್ ಪರ ಘೋಷಣೆ ಕೂಗಿದ ಘಟನೆಯನ್ನು ನಾವೆಲ್ಲರೂ ಖಂಡಿಸಿದ್ದೇವೆ. ಅದನ್ನು ಯಾರೂ ಸಮರ್ಥಿಸಿಕೊಂಡಿಲ್ಲ, ಅವರ ಮೇಲೆ ಕೇಸ್ ಹಾಕಿ ಜೈಲಿಗೆ ಕಳಿಸಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ನಗರದಲ್ಲಿ ಇಂದು ಧಾರವಾಡ ಪೂರ್ವ ಸಾರಿಗೆ ಅಧಿಕಾರಿಗಳ ಕಚೇರಿ ಉದ್ಘಾಟನೆಗೂ ಮುನ್ನ ಮಾತನಾಡಿದ ಅವರು, "ಬಿಜೆಪಿಯವರು ಮಂಡ್ಯದಲ್ಲಿ ಪ್ರತಿಭಟನೆ ಮಾಡುವಾಗ ಅವರ ಕಾರ್ಯಕರ್ತನೊಬ್ಬ ಪಾಕ್ ಪರ ಘೋಷಣೆ ಕೂಗುತ್ತಾನೆ. ಇನ್ನೊಬ್ಬ ಅವನ ಬಾಯಿ ಮುಚ್ಚಿಸಿದ್ದ. ಇದನ್ನು ನೋಡಿಯೂ ಬಿಜೆಪಿಯವರು ಸುಮ್ಮನೇ ಇದ್ದರು" ಎಂದರು.

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದೇ ನಾವು ಕಾಂಗ್ರೆಸ್ ನವರು. ಬಿಜೆಪಿಯ ಪೂರ್ವಜರು ಅಂದರೆ ಆರೆಸ್ಸೆಸ್, ಹಿಂದೂ ಪರಿಷತ್ ಕಾರ್ಯಕರ್ತರು ಯಾರು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲಿಲ್ಲ. ಸ್ವಾತಂತ್ರ್ಯದ ಹಕ್ಕು ದೇಶದ ಜನರಿಗೆ ಕೊಟ್ಟಿದ್ದೆ ನಮ್ಮ ಕಾಂಗ್ರೆಸ್ ಪಕ್ಷ. ನಮಗಿದ್ದಷ್ಟು ದೇಶಾಭಿಮಾನ ಅವರಗಿಲ್ಲ ಎಂದು ಹೇಳಿದರು.

ಎಫ್.ಎಸ್.ಎಲ್ ವರದಿ ಅಧಿಕೃತ ಎಂದು ಗೃಹಮಂತ್ರಿಗಳು ಹೇಳಿದ್ದಾರೆ. ಮುಂದಿನ ಕ್ರಮ ನ್ಯಾಯಾಲಯ ನೋಡಿಕೊಳ್ಳುತ್ತದೆ. ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಘೋಷಣೆ ಕೂಗಿದಾಗ ಬಿಜೆಪಿಯವರು ಏನು ಮಾಡುತ್ತಿದ್ದರು. ಅವರು ಅದನ್ನು ಯಾಕೆ ಖಂಡಿಸಲಿಲ್ಲ?. ಪ್ರತಾಪ್‌ ಸಿಂಹ ಬಳಿ ಪಾಸ್‌ ತಗೆದುಕೊಂಡು ಹೋಗಿ, ಪಾರ್ಲಿಮೆಂಟ್‌ ನಲ್ಲಿ ಹೊಗೆ ಬಾಂಬ್‌ ಹಾಕಿದರು. ಅದನ್ನು ಖಂಡಿಸಿಲ್ಲ, ಪ್ರತಾಪ್‌ ಸಿಂಹ ರಾಜಿನಾಮೆಯನ್ನು ಕೇಳಲಿಲ್ಲ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News