ಮಹಿಳೆಯರ ಮೇಲೆ ದೌರ್ಜನ್ಯವೆಸಗಿದವರ ಜೊತೆ ಬಿಜೆಪಿ ಇರಲ್ಲ : ಅಮಿತ್‌ ಶಾ

Update: 2024-05-01 17:38 GMT

ಅಮಿತ್ ಶಾ | PC : PTI 

ಹುಬ್ಬಳ್ಳಿ‌ : ಅತ್ಯಾಚಾರಿ ಯಾರೇ ಆಗಿದ್ದರೂ ಬಿಜೆಪಿ ಅವರ ಪರ ಇರಲ್ಲ. ಅವರಿಗೆ ಅತ್ಯಂತ ಕಠೋರ ಶಿಕ್ಷೆ ಕೊಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಇಲ್ಲಿನ ನೆಹರೂ ಮೈದಾನದಲ್ಲಿ ಬುಧವಾರ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಮಹಿಳೆಯರ ಮೇಲೆ ಅತ್ಯಾಚಾರ ಮಾಡುವಂತಹವರ ಜೊತೆ ಬಿಜೆಪಿ ಇರಲ್ಲ. ನಮ್ಮ ಜೊತೆಗಾರರೇ ಕೃತ್ಯದಲ್ಲಿ ಭಾಗಿಯಾಗಿದ್ದರೂ ಅತ್ಯಂತ ಕಠೋರ ಶಿಕ್ಷೆ ಕೊಡಬೇಕು ಎಂದರು.

ಕರ್ನಾಟಕದಲ್ಲಿ ಜೆಡಿಎಸ್ ಜೊತೆ ನಮ್ಮ ಮೈತ್ರಿ ಇದೆ. ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಹೊರಬಿದ್ದಿದ್ದೆ ತಡ, ಬಿಜೆಪಿ ಮೇಲೆ ಕಾಂಗ್ರೆಸ್ ಮುಗಿಬಿದ್ದಿದೆ. ಅತ್ಯಾಚಾರಿ ಯಾರೇ ಆಗಿದ್ದರೂ ಬಿಜೆಪಿ ಅವರ ಪರ ಇರಲ್ಲ ಎಂದು ನುಡಿದರು.

ಒಕ್ಕಲಿಗರ ಪ್ರಾಬಲ್ಯವಿರುವ ಪ್ರದೇಶಗಳ ಚುನಾವಣೆ ಮುಗಿಯುವವರೆಗೆ ಸುಮ್ಮನಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ. ಅವರಿಗೆ (ಪ್ರಜ್ವಲ್ ರೇವಣ್ಣ) ಓಡಿ ಹೋಗಲು ಅವಕಾಶ ನೀಡಿದ್ದೀರಿ. ಘೋರ ಅಪರಾಧ ಮಾಡಿದವರು ಓಡಿಹೋದರು ಎಂದು ಟೀಕಿಸಿದರು.

ನೇಹಾ ಹಿರೇಮಠ್ ಕೊಲೆ ಪ್ರಕರಣ ಪ್ರಸ್ತಾಪಿಸಿದ ಅಮಿತ್ ಶಾ, ಎ.18ರಂದು ನೇಹಾರನ್ನು  ಚಾಕುವಿನಿಂದ ಇರಿದು ಕೋಂದಿದ್ದು,  ನೇಹಾ ಹಿರೇಮಠ್ ಹಂತಕನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News