ಬೇಲೂರು | ವಿಶೇಷ ಚೇತನ ಬಾಲಕಿಯ ಅತ್ಯಾಚಾರ: ಆರೋಪಿ ನೆರೆಮನೆ ನಿವಾಸಿ ಪರಾರಿ

Update: 2025-02-06 10:23 IST
ಬೇಲೂರು | ವಿಶೇಷ ಚೇತನ ಬಾಲಕಿಯ ಅತ್ಯಾಚಾರ: ಆರೋಪಿ ನೆರೆಮನೆ ನಿವಾಸಿ ಪರಾರಿ

   ಸಾಂದರ್ಭಿಕ ಚಿತ್ರ 

  • whatsapp icon

ಬೇಲೂರು: ಫೆ.6: ವಿಶೇಷ ಚೇತನ ಬಾಲಕಿಯ ಮೇಲೆ ನೆರೆಮನೆಯ ನಿವಾಸಿಯೇ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ತಾಲೂಕಿನ ಹಳೇಬೀಡು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಾಲಕಿಯ ಪೋಷಕರು ಮಧ್ಯಾಹ್ನ ಬೀಗರ ಔತಣವೊಂದಕ್ಕೆ ಹೋಗಿದ್ದರು. ಆ ಸಮಯದಲ್ಲಿ ಬಾಲಕಿ ಮನೆಯಲ್ಲಿ ಒಂಟಿಯಾಗಿದ್ದಳು. ಈ ವೇಳೆ ನೆರೆಮನೆಯ ವ್ಯಕ್ತಿ ಚಾಕೊಲೇಟ್ ಕೊಡುವ ನೆಪದಲ್ಲಿ ಬಂದು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಬಾಲಕಿ ಪೋಷಕರು ಮನೆಗೆ ಮರಳಿದಾಗ ಬಾಲಕಿಯ ವರ್ತನೆ ಬದಲಾಗಿದ್ದನ್ನು ಹಾಗೂ ಆಕೆ ನೋವು ಅನುಭವಿಸುತ್ತಿರುವುದನ್ನು ಕಂಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಅತ್ಯಾಚಾರ ಕೃತ್ಯ ಬೆಳಕಿಗೆ ಬಂದಿದೆ.

ತಾನು ಎಸಗಿರುವ ಪೈಶಾಚಿಕ ಕೃತ್ಯ ಬಹಿರಂಗವಾದ ತಕ್ಷಣ ಎರಡು ಮಕ್ಕಳ ತಂದೆಯಾಗಿರುವ ಆರೋಪಿ ಪರಾರಿಯಾಗಿದ್ದಾನೆ.

ಈ ಬಗ್ಗೆ ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News