ಹಾಸನ | ಪ್ರತ್ಯೇಕ ಘಟನೆ: ನಾಲ್ವರು ನೀರುಪಾಲು

Update: 2025-03-22 22:52 IST
ಹಾಸನ | ಪ್ರತ್ಯೇಕ ಘಟನೆ: ನಾಲ್ವರು ನೀರುಪಾಲು

ನೀರುಪಾಲಾದ ಯುವಕರು

  • whatsapp icon

ಸಕಲೇಶಪುರ: ಹೇಮಾವತಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ತಾಲೂಕಿನ ಹೆನ್ನಲಿ ಗ್ರಾಮದಲ್ಲಿ ನಡೆದಿದೆ.

ಭರತ್ (27) ಮತ್ತು ಪ್ರಕಾಶ್ (29) ಮೃತ ಯುವಕರು. ಮೃತರನ್ನು ತಾಲ್ಲೂಕಿನ ಕಾಟಳ್ಳಿ ಮೂಲದ ಪ್ರಕಾಶ್, ಚಿಕ್ಕಮಗಳೂರು ಜಿಲ್ಲೆ ಹಾಂದಿ ಗ್ರಾಮದ ಭರತ ಎಂದು ಗುರುತಿಸಲಾಗಿದೆ.

ಬಿಸಿಲು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಈ ಇಬ್ಬರೂ ಸ್ನೇಹಿತರು ಈಜಲು ತೆರಳಿದ್ದರು.  ಈ ವೇಳೆ ಸರಿಯಾಗಿ ಈಜು ಬಾರದ ಕಾರಣ, ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕದಳ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಮೃತದೇಹ ಹೊರ ತೆಗೆದರು. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 

ಅರಕಲಗೂಡಿನಲ್ಲಿ ಇಬ್ಬರು ನೀರುಪಾಲು:

ಆಕಸ್ಮಿಕವಾಗಿ ವಾಗಿ ಕೆರೆಗೆ ಬಿದ್ದು ಇಬ್ಬರು ಸಾವನ್ನಪ್ಪಿರುವ ಘಟನೆ ಅರಕಲಗೂಡು ತಾಲೂಕಿನ ಮಣಜೂರು ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಣ (46), ರವಿ (40) ಮೃತಪಟ್ಟವರು.

ಮಣಜೂರು ಕೆರೆಯ ಬಳಿ ತೆರಳಿದ್ದ ಲಕ್ಷ್ಮಣ ಹಾಗೂ ರವಿ, ಕಾಲು ಜಾರಿ ನೀರಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.

ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಓರ್ವನ ಮೃತದೇಹ ಹೊರಕ್ಕೆ ತೆಗೆದಿದ್ದಾರೆ. ಮತ್ತೊಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಅರಕಲಗೂಡು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ತನಿಖೆ ನಂತರ ನಿಜ ಕಾರಣ ತಿಳಿಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News