ಅರಕಲಗೂಡು | ನೂತನ ಮನೆಯ ಮರಗೆಲಸದ ವೇಳೆ ವಿದ್ಯುತ್ ಆಘಾತ : ಇಬ್ಬರು ಯುವಕರು ಮೃತ್ಯು
Update: 2025-04-10 16:34 IST
ಸಾಂದರ್ಭಿಕ ಚಿತ್ರ | PC: Meta AI
ಹಾಸನ: ಮನೆಗೆಲಸಕ್ಕೆಂದು ಬಂದಿದ್ದ ಇಬ್ಬರು ಯುವಕರು ವಿದ್ಯುತ್ ಆಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾಸನದ ಅರಕಲಗೂಡು ತಾಲ್ಲೂಕಿನ ಗರಿಘಟ್ಟ ಗ್ರಾಮದಲ್ಲಿ ಗುರುವಾರ ನಡೆದಿದೆ.
ಮೃತ ಯುವಕರನ್ನು ಸಿದ್ದಾಪುರ ಗ್ರಾಮ ಸೃಜನ್ (19), ಸುಭಾಷ್ ನಗರದ ಸಂಜಯ್ (19) ಎಂದು ಗುರುತಿಸಲಾಗಿದೆ.
ಗರಿಘಟ್ಟ ಗ್ರಾಮದ ಮಹೇಂದ್ರ ಎಂಬುವವರ ನೂತನ ಮನೆಯ ಮರಗೆಲಸಕ್ಕೆ ಆಗಮಿಸಿದ್ದ ಈ ಯುವಕರು, ಕೆಲಸದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಅರಕಲಗೂಡು ಪೊಲೀಸ್ ಠಾಣೆ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ.