ಸಕಲೇಶಪುರ: ಫೈನಾನ್ಸ್ ಕಿರುಕುಳ ಆರೋಪ; ರೈತ ಆತ್ಮಹತ್ಯೆ

Update: 2025-04-22 14:35 IST
ಸಕಲೇಶಪುರ: ಫೈನಾನ್ಸ್ ಕಿರುಕುಳ ಆರೋಪ; ರೈತ ಆತ್ಮಹತ್ಯೆ
  • whatsapp icon

ಹಾಸನ, ಏ. 22:  ರೈತರೊಬ್ಬರು ಫೈನಾನ್ಸ್ ಕಿರುಕುಳ ಮತ್ತು ಸಾಲದ ಒತ್ತಡ ತಾಳಲಾರದೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ತಾಲ್ಲೂಕಿನ ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯ ಜೋಡಿಮಲ್ಲಪ್ಪನಳ್ಳಿ ಗ್ರಾಮದಲ್ಲಿ ನಡೆದಿದೆ.

ವೆಂಕಟೇಗೌಡ (48) ಆತ್ಮಹತ್ಯೆ ಮಾಡಿಕೊಂಡ ರೈತ. ಇವರು ಫೈನಾನ್ಸ್‌ಗಳಿಂದ 3 ಲಕ್ಷ 70 ಸಾವಿರ, ಬ್ಯಾಂಕ್, ವ್ಯವಸಾಯ ಸಹಕಾರ ಸಂಘ, ಧರ್ಮಸ್ಥಳ ಸಂಘ ಮತ್ತು ಕೈಸಾಲ ಸೇರಿ 3 ಲಕ್ಷ 90 ಸಾವಿರ, ಒಟ್ಟು 7 ಲಕ್ಷ 60 ಸಾವಿರ ರೂ. ಸಾಲ ಮಾಡಿದ್ದರು ಎನ್ನಲಾಗಿದೆ. 

ಸಾಲದ ಹಣವನ್ನು ಪಾವತಿಸುವಂತೆ ಫೈನಾನ್ಸ್ ಸಂಸ್ಥೆಗಳಿಂದ ನಿರಂತರ ಕಿರುಕುಳಕ್ಕೊಳಗಾಗಿದ್ದ ಇವರು ಮನನೊಂದು ಅವರು ಈ ಕೃತ್ಯಕ್ಕೆ ಶರಣಾಗಿದ್ದಾರೆ ಆರೋಪಿಸಲಾಗಿದೆ.

ಘಟನೆಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News