ಬೇಲೂರು: ಬಿರುಗಾಳಿ ಮಳೆಗೆ ಹಾರಿದ ಶಾಲಾ ಕೊಠಡಿಯ ಮೇಲ್ಛಾವಣಿ
Update: 2025-04-28 00:14 IST

ಬೇಲೂರು: ತಾಲೂಕಿನ ಬಿಕ್ಕೋಡು ಹೋಬಳಿ ತಗರೆ ಗ್ರಾಮದ ಬಳಿಯ ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರಿಗೆ ಸೇರಿದ ಕುಮಾರ ಪ್ರೌಢಶಾಲೆಯ ಕೊಠಡಿಗಳ ಮೇಲ್ಛಾವಣಿ ಶನಿವಾರ ಸುರಿದ ಭಾರೀ ಮಳೆ ಗಾಳಿಗೆ ಹಾರಿ ಬಿದ್ದಿದೆ.
ಎಚ್.ಕೆ. ಕುಮಾರಸ್ವಾಮಿ ಅವರು ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿದ್ದ ಸಂದರ್ಭದಲ್ಲಿ ತಾಲೂಕಿನ ಗ್ರಾಮದ ಸಮೀಪ ಮಲೆನಾಡು ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು 1 ರಿಂದ 10ನೇ ತರಗತಿಯ ತನಕ ಕುಮಾರ್ ಎಂಬ ವಿದ್ಯಾಸಂಸ್ಥೆಯನ್ನು ಆರಂಭಿಸಿದರು. ಸದ್ಯ ಕುಮಾರ ಪ್ರೌಢಶಾಲೆ ಉತ್ತಮವಾಗಿ ನಡೆಯುತ್ತಿದ್ದು, ಸುಮಾರು 300 ಮಕ್ಕಳ ಸಂಖ್ಯೆ ಯನ್ನು ಹೊಂದಿರುವ ಕುಮಾರ್ ಪ್ರೌಢಶಾಲೆಗೆ ರಜೆ ಇರುವ ಹಿನ್ನೆಲೆಯಲ್ಲಿ ಮೇಲ್ಪಾವಣಿ ಕುಸಿತವಾದ ಸಂದರ್ಭ ಯಾವುದೇ ಪ್ರಾಣಾಪಾಯವಾಗಿಲ್ಲ.
ಕಳಪೆ ಕಾಮಗಾರಿಯಿಂದ ಮೇಲ್ಛಾವಣಿ ಕುಸಿದು ಬಿದ್ದಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.