ಫೈನಾನ್ಸ್ ಕಿರುಕುಳ ಆರೋಪ; ಮಹಿಳೆ ಆತ್ಮಹತ್ಯೆ
Update: 2025-03-12 14:02 IST

ಹಾಸನ, ಫೆ. 12: ಫೈನಾನ್ಸ್ ಸಂಸ್ಥೆಗಳ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಲೂರು ತಾಲ್ಲೂಕಿನ ಹಳ್ಳಿಯೋರು ಬಳಿಯ ಬೆಳೆಕೊಪ್ಪಳ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆಗೈದ ಮಹಿಳೆಯನ್ನು ಕೆಂಚಮ್ಮ (53) ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡಿಕೊಂಡು ಅವರು ಜೀವನ ಸಾಗಿಸುತ್ತಿದ್ದರು. ಈಸಫ್ ಮತ್ತು ಬಿ.ಎಸ್.ಎಸ್. ಸಂಘದವರಿಂದ ₹50,000 ರಿಂದ ₹60,000 ಸಾಲ ಪಡೆದಿದ್ದರು.
ಬುಧವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಅವರ ಮನೆಗೆ ಬಂದ ಫೈನಾನ್ಸ್ ಸಂಸ್ಥೆಯ ಇಬ್ಬರು ವ್ಯಕ್ತಿಗಳು ಹಣ ವಾಪಸು ನೀಡುವಂತೆ ಒತ್ತಾಯಿಸುತ್ತಿದ್ದರು. ಇದರಿಂದ ಮನನೊಂದ ಕೆಂಚಮ್ಮ ಮನೆಯ ಹಿಂದಿನ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಮೃತರ ಅಳಿಯ ಕುಮಾರ್ ತಿಳಿಸಿದ್ದಾರೆ.