ಚನ್ನರಾಯಪಟ್ಟಣ | ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ

Update: 2025-01-17 15:22 IST
ಚನ್ನರಾಯಪಟ್ಟಣ | ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ
  • whatsapp icon

ಹಾಸನ: ಜ,17: ತಂತ್ರಗಾರಿಕೆಯಿಂದ ವಾಹನ ಪಂಕ್ಚರ್ ಮಾಡಿ, ಚಾಲಕನನ್ನು ಕೆಳಗಿಳಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಚನ್ನರಾಯಪಟ್ಟಣ ತಾಲೂಕಿನ ಕುಂಬಾರಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಂಜುಂಡೇಗೌಡ ಅಲಿಯಾಸ್ ಲೋಕೇಶ್ (44) ಕೊಲೆಯಾದವರು. ಇವರು ಹೈನುಗಾರರಿಂದ ಹಾಲು ಸಂಗ್ರಹ ಮಾಡಿ ಡೇರಿಗೆ ಹಾಲು ಹಾಕುವ ಕಾಯಕ ಮಾಡುತ್ತಿದ್ದರು. ಅದೇರೀತ ವಾಹನದಲ್ಲಿ ಹಾಲು ಕೊಂಡೊಯ್ಯುತ್ತಿದ್ದ ವೇಳೆ ರಸ್ತೆಯಲ್ಲಿ ದುಷ್ಕರ್ಮಿಗಳು ಮರದ ಪಟ್ಟಿಗೆ ಮೊಳೆ ಇಟ್ಟು ವಾಹನ ಪಂಕ್ಚರ್ ಮಾಡಿದ್ದಾರೆ. ಮರುವನಹಳ್ಳಿ-ಮಡಬ ರಸ್ತೆಯಲ್ಲಿ ವಾಹನ ಪಂಕ್ಚರ್ ಆದ ಕೂಡಲೇ ಕೆಳಗಿಳಿದ ನಂಜುಂಡೇಗೌಡರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ.

ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News