ಸಕಲೇಶಪುರ : ವಿಷಪ್ರಾಶನ ಆರೋಪ; ನಾಟಿಕೋಳಿಗಳ ಮಾರಣಹೋಮ
Update: 2024-12-19 07:02 GMT
ಹಾಸನ: ಸುಮಾರು 15ಕ್ಕೂ ಹೆಚ್ಚು ಕೋಳಿಗಳಿಗೆ ವಿಷ ಇಟ್ಟು ಕೊಂದಿರುವ ಘಟನೆ ಸಕಲೇಶಪುರ ತಾಲೂಕಿನ ಹಾನುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾದಿಗೆ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿರುವ ಬಗ್ಗೆ ವರದಿಯಾಗಿದೆ.
ನಾಟಿ ಕೋಳಿಗಳು ಸತ್ತು ಬಿದ್ದಿರುವುದನ್ನು ಗಮನಿಸಿದ ಗ್ರಾಮಸ್ಥರು ಆಶ್ಚರ್ಯ ಚಿಕಿತರಾಗಿದ್ದು, ಪ್ರಾಣ ಬಿಟ್ಟಿರುವ ಕೋಳಿಯೊಂದರ ಬಾಯಲ್ಲಿ ಬೆಂಕಿ ಬರುತ್ತಿದ್ದು ಕಿಡಿಗೇಡಿಗಳ ಕೃತ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು 15 ಹೆಚ್ಚು ಕೋಳಿಗಳಿಗೆ ವಿಷ ಉಣಿಸಿ ಕೊಂದಿರುವ ಘಟನೆ ಸಕಲೇಶಪುರ ತಾಲೂಕಿನ ಹಾನುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾದಿಗೆ ಗ್ರಾಮದಲ್ಲಿ ಬುಧವಾರ ನಡೆದಿದೆ. pic.twitter.com/oHv4BJKtvR
— ವಾರ್ತಾ ಭಾರತಿ | Vartha Bharati (@varthabharati) December 19, 2024