ಹಾಸನ: ಪಿಡಿಒ ಪರೀಕ್ಷೆ ವೇಳೆ ವಿವಾದಕ್ಕೆ ಕಾರಣವಾದ ವಸ್ತ್ರ ಸಂಹಿತೆ

Update: 2024-12-08 08:25 GMT

ಹಾಸನ:ನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗೆ ಪರೀಕ್ಷೆ ನಡೆಯಿತು. ಈ ವೇಳೆ ವಸ್ತ್ರಸಂಹಿತೆ ನಿಯಮದ ಕಟ್ಟುನಿಟ್ಟು ವಾದ- ವಿವಾದಕ್ಕೆ ಕಾರಣವಾಯಿತು.

ಪರೀಕ್ಷೆಗೆ ಬಂದ ಕೆಲ ಮಹಿಳಾ ಅಭ್ಯರ್ಥಿಗಳು ತುಂಬುತೋಳು ಬಟ್ಟೆ ಧರಿಸಿದ್ದರು. ಪರೀಕ್ಷಾ ಕೇಂದ್ರದ ಅಧಿಕಾರಿಗಳು, ಹಾಲ್ ಟಿಕೆಟ್‌ನಲ್ಲಿ ವಸ್ತ್ರಸಂಹಿತೆಯ ನಿಯಮಗಳು ವಿವರಿಸಲಾಗಿದ್ದು, ಅವನ್ನು ಉಲ್ಲಂಘಿಸಿದ್ದೀರಿ ಎಂದು, ಅರ್ಧ ತೋಳಿನ ವರೆಗೆ ಬಟ್ಟೆ ಕತ್ತರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದರು.

ಈ ವೇಳೆ ಅಧಿಕಾರಿಗಳು ಮತ್ತು ಮಹಿಳಾ ಪರೀಕ್ಷಾರ್ಥಿಗಳ ನಡುವೆ ವಾಗ್ವಾದವೂ ನಡೆಯಿತು. “ನಮ್ಮ ಕರ್ತವ್ಯ ನಾವು ಮಾಡಲೇಬೇಕು” ಎಂದು ಅಧಿಕಾರಿಗಳು ಸ್ಪಷ್ಟ ನಿಲುವು ಪ್ರದರ್ಶಿಸಿದರು. ಅರ್ಧ ತೋಳಿನವರೆಗೂ ಬಟ್ಟೆ ಕತ್ತರಿಸಿದ ನಂತರ ಪರೀಕ್ಷಾ ಕೇಂದ್ರದೊಳಗೆ ತೆರಳಿದ ಹಲವರು ಬೇಸರ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News