ಹಾಸನ | ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ಧರಣಿ

Update: 2024-05-04 23:26 IST
ಹಾಸನ | ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ಧರಣಿ
  • whatsapp icon

ಹಾಸನ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳಾದ ರೇವಣ್ಣ ಮತ್ತು ಪ್ರಜ್ವಲ್ ರನ್ನು ಬಂಧಿಸಿ ಎಸ್.ಐ.ಟಿ. ಮುಂದೆ ವಿಚಾರಣೆಗೆ ಹಾಜರುಪಡಿಸಲು ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ನಗರದಲ್ಲಿ ಧರಣಿ ನಡೆಸಲಾಯಿತು.

ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಮಾತನಾಡಿ, ʼಸಂಸದರಾಗಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಅಶ್ಲೀಲ ವಿಡಿಯೋಗೆ ಸಂಬಂಧಪಟ್ಟಂತೆ ಹಾಸನ ಜಿಲ್ಲೆಯ ಹಲವಾರು ಪೊಲೀಸ್ ಠಾಣೆಯಲ್ಲಿ ಅನೇಕ ಮಹಿಳೆಯರು ದೂರು ದಾಖಲು ಮಾಡಿದ್ದಾರೆ. ಇನ್ನು ಹಲವಾರು ಜನ ಸಂತ್ರಸ್ತ ಮಹಿಳೆಯರು ಮುಂದೆ ಬರುವುದಕ್ಕೆ ಹೆದರುತ್ತಿದ್ದಾರೆ. ಯಾರು ಸಂತ್ರಸ್ತ ಮಹಿಳೆಯರು ಇದ್ದಾರೆ ದಯಮಾಡಿ ಮುಂದೆ ಬಂದು ದೂರು ದಾಖಲು ಮಾಡಿದರೆ ನಮ್ಮ ಸರಕಾರ ಮತ್ತು ನಮ್ಮ ಪಕ್ಷವು ನಿಮಗೆ ರಕ್ಷಣೆ ಕೊಡಲಿದೆ ಎಂದು ದೈರ್ಯ ತುಂಬಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಚ್.ಕೆ. ಮಹೇಶ್, ಬಾಗೂರು ಮಂಜೇಗೌಡ, ಪ್ರಕಾಶ್ ಗೌಡಗೆರೆ, ರಘು, ಗೊರೂರು ರಂಜಿತ್, ಪ್ರಕಾಶ್, ಮಲ್ಲಿಗೆವಾಳ್ ದೇವಪ್ಪ, ತಾರಚಂದನ್, ರಾಮಚಂದ್ರ, ಮುಬ್ಬಶಿರ್, ಅಮ್ಜದ್ ಖಾನ್, ಆರೀಪ್ ಖಾನ್ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News