ಸಕಲೇಶಪುರ: ಸಾಫ್ಟ್‌ವೇ‌ರ್ ಇಂಜಿನಿಯ‌ರ್ ಹೃದಯಾಘಾತದಿಂದ‌ ಮೃತ್ಯು

Update: 2024-12-09 11:11 IST
ಸಕಲೇಶಪುರ:    ಸಾಫ್ಟ್‌ವೇ‌ರ್ ಇಂಜಿನಿಯ‌ರ್ ಹೃದಯಾಘಾತದಿಂದ‌ ಮೃತ್ಯು
  • whatsapp icon

ಹಾಸನ:ಡಿ, 9: ಸಕಲೇಶಪುರ ತಾಲ್ಲೂಕಿನ ರಾಮೇನಹಳ್ಳಿ ಗ್ರಾಮದ ಸಾಫ್ಟ್‌ವೇ‌ರ್ ಇಂಜಿನಿಯ‌ರೊಬ್ಬರು ಹೃದಯಾಘಾತದಿಂದ ರವಿವಾರ ಸಂಜೆ ಮೃತಪಟ್ಟಿದ್ದಾರೆ.

ಬೆಂಗಳೂರಿನ ಸಾಫ್ಟ್‌ವೇರ್ ಕಂಪೆನಿಯೊಂದರ ಉದ್ಯೋಗಿಯಾಗಿದ್ದ ಸಮರ್ಥ್ (26) ಮೃತ ಯುವಕ. ಕಳೆದ ಕೆಲವು ತಿಂಗಳುಗಳಿಂದ 'ವರ್ಕ್ ಪ್ರಂ ಹೋಮ್' ಸೌಲಭ್ಯ ಪಡೆದು ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದರು. 

ನಿನ್ನೆ ಬೆಳಗಿನ ಜಾವದವರೆಗೆ ಕೆಲಸ ಮಾಡಿದ್ದ ಆತ ಸಂಜೆ ಎದ್ದು ನೀರು ಕುಡಿದ ನಂತರ ಹಠಾತ್ ಕುಸಿದು ಬಿದ್ದರು ಎನ್ನಲಾಗಿದೆ. ತಕ್ಷಣವೇ ಕುಟುಂಬಸ್ಥರು ವೈದ್ಯರನ್ನು ಕರೆಸಿದರೂ, ತಪಾಸಣೆ ವೇಳೆ ಸಮರ್ಥ್  ಮೃತಪಟ್ಟಿರುವುದಾಗಿ ವೈದ್ಯರು ದೃಢೀಕರಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News