ಹಾಸನ | ಮೈಕ್ರೋ ಫೈನಾನ್ಸ್ ಕಿರಕುಳ ಆರೋಪ; ರೈತ ಆತ್ಮಹತ್ಯೆ

Update: 2025-02-25 16:30 IST
ಹಾಸನ | ಮೈಕ್ರೋ ಫೈನಾನ್ಸ್ ಕಿರಕುಳ ಆರೋಪ; ರೈತ ಆತ್ಮಹತ್ಯೆ
  • whatsapp icon

ಹಾಸನ : ಮೈಕ್ರೋ ಫೈನಾನ್ಸ್ ಕಿರಕುಳಕ್ಕೆ ಬೇಸತ್ತು ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದ ಅರಕಲಗೂಡು ತಾಲ್ಲೂಕು ಕಳ್ಳಿಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಕೇಶವಯ್ಯ (50) ಎಂದು ಗುರುತಿಸಲಾಗಿದೆ. ಕೇಶವಯ್ಯ ಅವರು ಎರಡು ಖಾಸಗಿ ಫೈನಾನ್ಸ್‌ಗಳಿಂದ ತಲಾ 5 ಲಕ್ಷ ಹಾಗೂ 60 ಸಾವಿರ ಸಾಲ ಪಡೆದಿದ್ದರು ಎನ್ನಲಾಗಿದೆ.

ಇದೇ ವೇಳೆ 5 ಲಕ್ಷ ರೂ ಹಣ ಪಾವತಿಸುವಂತೆ ಫೈನಾನ್ಸ್ ಸಿಬ್ಬಂದಿಗಳು ಕೇಶವಯ್ಯ ಅವರ ಮನೆಗೆ ನೋಟಿಸ್ ಅಂಟಿಸಿದ್ದರು. ನಂತರ ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿತ್ತು. ಇದರಿಂದ ಮನೆ ಹರಾಜು ಹಾಕುವಂತೆ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿತ್ತು ಎಂದು ತಿಳಿದು ಬಂದಿದೆ.

ಈ ಹಿನ್ನಲೆಯಲ್ಲಿ ಮನನೊಂದಿದ್ದ ರೈತ ಕೇಶವಯ್ಯ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News