ಹಾಸನ| ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಆಘಾತ; ಓರ್ವ ಯುವಕ ಮೃತ್ಯು, ಮತ್ತೋರ್ವನಿಗೆ ಗಂಭೀರ ಗಾಯ

Update: 2024-02-01 12:04 GMT

ಪ್ರಕಾಶ 

ಹಾಸನ: ಕಬ್ಬಿಣದ ಪೈಪ್ ವೆಲ್ಡಿಂಗ್ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕನೋರ್ವ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಸಕಲೇಶಪುರ ತಾಲೂಕಿನ ಆಲುಹಳ್ಳಿ-ಕದಡರವಳ್ಳಿ ಬಳಿ ನಡೆದಿದೆ.

ಗುಲ್ಬರ್ಗಾ ಜಿಲ್ಲೆಯ ಚಿಂಚೋಳ್ಳಿ ತಾಲ್ಲೂಕಿನ ನಿಂಗದಳ್ಳಿ ಗ್ರಾಮದ ಪ್ರಕಾಶ (30) ಮೃತಪಟ್ಟವರು. ನಿಂಗದಳ್ಳಿ ಗ್ರಾಮದ ರಾಜು (20) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಎತ್ತಿನಹೊಳೆ ಯೋಜನೆಯ ಪ್ಯಾಕೇಜ್-04ರ ಕಾಮಗಾರಿಯ ವೇಳೆ ಈ ಅವಘಡ ಸಂಭವಿಸಿದೆ.

ಪರಿಹಾರ ನೀಡುವವರೆಗೆ ಮೃತದೇಹವನ್ನು ಪಡೆಯುವುದಿಲ್ಲ ಎಂದು ಮೃತ ಪ್ರಕಾಶ ಅವರ ಕುಟುಂಬಸ್ಥರು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಪ್ರತಿಭಟಿಸಿದ್ದಾರೆ.

ಘಟನೆಯು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News