ನೈಜೀರಿಯಾ | ತೈಲ ಟ್ಯಾಂಕರ್ ಸ್ಫೋಟ ; ಕನಿಷ್ಠ 52 ಮಂದಿ ಸಾವು

Update: 2024-09-09 16:47 GMT

PC : APF

ಲಾಗೋಸ್ : ನೈಜೀರಿಯಾದಲ್ಲಿ ತೈಲ ಸಾಗಿಸುತ್ತಿದ್ದ ಟ್ಯಾಂಕರ್ ಪ್ರಯಾಣಿಕರು ಮತ್ತು ಜಾನುವಾರುಗಳಿದ್ದ ಟ್ರಕ್‍ಗೆ ಡಿಕ್ಕಿಯಾಗಿ ಸ್ಫೋಟಗೊಂಡು ಕನಿಷ್ಠ 52 ಮಂದಿ ಮೃತಪಟ್ಟಿದ್ದಾರೆ. 50ಕ್ಕೂ ಅಧಿಕ ಜಾನುವಾರುಗಳು ಸಜೀವ ದಹನಗೊಂಡಿರುವುದಾಗಿ ರಕ್ಷಣಾ ಏಜೆನ್ಸಿಯ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಉತ್ತರ ನೈಜೀರಿಯಾದ ನೈಜರ್ ರಾಜ್ಯದ ಅಗೈ ಪ್ರಾಂತದಲ್ಲಿ ಅಪಘಾತ ಸಂಭವಿಸಿದೆ. ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್ ಎದುರಿನಿಂದ ಬರುತ್ತಿದ್ದ ಟ್ರಕ್‍ಗೆ ಡಿಕ್ಕಿಯಾದ ಬಳಿಕ ವ್ಯಾನ್ ಹಾಗೂ ಕ್ರೇನ್ ಒಂದಕ್ಕೂ ಡಿಕ್ಕಿ ಹೊಡೆದು ಸ್ಫೋಟಗೊಂಡಿದೆ. ಟ್ರಕ್‍ಗೂ ಬೆಂಕಿ ಹಿಡಿದಿದ್ದು ಕನಿಷ್ಠ 52 ಜನರು ಮತ್ತು 50ಕ್ಕೂ ಅಧಿಕ ಜಾನುವಾರುಗಳು ಜೀವಂತ ದಹನಗೊಂಡಿದ್ದಾರೆ.

ಸುಟ್ಟು ಕರಕಲಾದ ಮೃತದೇಹಗಳನ್ನು ಸಾಮೂಹಿಕ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ನೈಜರ್‍ನ ತುರ್ತು ಪರಿಸ್ಥಿತಿ ನಿರ್ವಹಣಾ ಏಜೆನ್ಸಿಯ ವಕ್ತಾರ ಇಬ್ರಾಹಿಂ ಹುಸೇನಿಯನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News