ಶೇಕ್ ಹಸೀನಾ ಸೇರಿದಂತೆ ಎಲ್ಲ ದಂಗೆ ಆರೋಪಿಗಳ ವಿಚಾರಣೆಗೆ ಐಸಿಟಿ ಗಡುವು

Update: 2024-12-29 03:20 GMT

PC: PTI

ಢಾಕಾ: ಮಾನವತೆ ವಿರುದ್ಧದ ಅಪರಾಧ ಆರೋಪ ಎದುರಿಸುತ್ತಿರುವ ಮಾಜಿ ಪ್ರಧಾನಿ ಶೇಕ್ ಹಸೀನಾ ಸೇರಿದಂತೆ ಎಲ್ಲ ಉನ್ನತ ನಾಯಕರ ವಿಚಾರಣೆಗಳನ್ನು ಒಂದು ವರ್ಷದ ಒಳಗಾಗಿ ಪೂರ್ಣಗೊಳಿಸುವಂತೆ ಬಾಂಗ್ಲಾದೇಶ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ಐಟಿಸಿ) ಮುಖ್ಯ ಅಭಿಯೋಜಕ ಮೊಹ್ಮದ್ ತಾಜುಲ್ ಇಸ್ಲಾಂ ಗಡುವು ನೀಡಿದ್ದಾರೆ.

ಬಾಂಗ್ಲಾದೇಶ ಅಧ್ಯಯನ ವೇದಿಕೆ ಆಯೋಜಿಸಿದ್ದ ರಾಷ್ಟ್ರೀಯ ಸಂವಾದದಲ್ಲಿ ಮಾತನಾಡಿದ ಅವರು, ಈ ಸಂಬಂಧ ಎರಡು ದಿನಗಳ ಹಿಂದೆ ಮುಖ್ಯ ಸಲಹೆಗಾರ ಮೊಹ್ಮದ್ ಯೂನುಸ್ ಅವರೊಂದಿಗೆ ಮಾತನಾಡಿದ್ದು ಹಲವು ಆದ್ಯತೆಗಳಿಗಾಗಿ ಎಂದು ಸ್ಪಷ್ಟಪಡಿಸಿದರು.

ದೇಶವನ್ನು ಹತ್ಯೆಯ ಮತ್ತು ಕಣ್ಮರೆಯ ನಾಡಾಗಿ ಪರಿವರ್ತಿಸಿದ ಹಾಗೂ ಬಾಂಗ್ಲಾದ ಮಣ್ಣನ್ನು ವಿದ್ಯಾರ್ಥಿಗಳ ರಕ್ತದಿಂದ ತೋಯಿಸಿದ ನಾಯಕರ ವಿರುದ್ಧದ ವಿಚಾರಣೆ ಅತಿದೊಡ್ಡ ಆದ್ಯತೆ ಎಂದು ಯೂನುಸ್ ಹೇಳಿದ್ದಾಗಿ ಮುಖ್ಯ ಅಭಿಯೋಜಕರು ಹೇಳಿದರು.

"ಅಗ್ರಗಣ್ಯ ನಾಯಕರು ಮತ್ತು ಅಗ್ರ ಅಪರಾಧಿಗಳನ್ನು ಸಾಮಾನ್ಯವಾಗಿ ಮಾನವತೆ ವಿರುದ್ಧದ ಅಪರಾಧಕ್ಕಾಗಿ ವಿಚಾರಣೆಗೆ ಗುರಿಪಡಿಸಲಾಗುತ್ತದೆ" ಎಂದು ತಾಜುಲ್ ಇಸ್ಲಾಂ ಹೇಳಿದರು. ಕಳೆದ ಜುಲೈ- ಆಗಸ್ಟ್ನಲ್ಲಿ ನಡೆದ ವಿದ್ಯಾರ್ಥಿ ದಂಗೆಯ ವೇಳೆ ಶೇಕ್ ಹಸೀನಾ ಹತ್ಯೆಯ ನ್ಯೂಕ್ಲಿಯಸ್ ಆಗಿದ್ದರು ಎಂದು ಅವರು ಪ್ರತಿಪಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News