ಗಾಝಾ ಆಸ್ಪತ್ರೆಯ ನಿರ್ದೇಶಕರನ್ನು ಬಿಡುಗಡೆ ಮಾಡಲು ಇಸ್ರೇಲ್‍ಗೆ ವಿಶ್ವ ಆರೋಗ್ಯ ಸಂಸ್ಥೆ ಆಗ್ರಹ
Update: 2024-12-30 16:48 GMT
ಜಿನೆವ : ಗಾಝಾದ ಕಮಲ್ ಅಡ್ವಾನ್ ಆಸ್ಪತ್ರೆಯ ನಿರ್ದೇಶಕ ಹೊಸಮ್ ಅಬು ಸಫಿಯೆಹ್ ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಇಸ್ರೇಲನ್ನು ಆಗ್ರಹಿಸಿದೆ.
ಶುಕ್ರವಾರ ಉತ್ತರ ಗಾಝಾದ ಬೀತ್ ಲಾಹಿಯಾದಲ್ಲಿರುವ ಆಸ್ಪತ್ರೆಯ ಒಳಪ್ರವೇಶಿಸಿದ್ದ ಇಸ್ರೇಲ್ ಸೇನೆ ಅಬು ಸಫಿಯೆಹ್‍ರನ್ನು ಬಂಧಿಸಿತ್ತು ಮತ್ತು ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ತೆರವುಗೊಳಿಸಿತ್ತು. `ಗಾಝಾದಲ್ಲಿನ ಆಸ್ಪತ್ರೆಗಳು ಮತ್ತೊಮ್ಮೆ ಯುದ್ಧಭೂಮಿಗಳಾಗಿವೆ ಮತ್ತು ಆರೋಗ್ಯ ವ್ಯವಸ್ಥೆಗೆ ಗಂಭೀರ ಬೆದರಿಕೆ ಎದುರಾಗಿದೆ' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಟೆಡ್ರೋಸ್ ಅಧನಾಮ್ ಘೆಬ್ರೆಯೇಸಸ್ ಕಳವಳ ವ್ಯಕ್ತಪಡಿಸಿದ್ದಾರೆ.