ಭಾರತೀಯರ ಹಜ್ ಕೋಟಾದಲ್ಲಿ ಹತ್ತು ಸಾವಿರ ಹೆಚ್ಚಳ ಮಾಡಿದ ಸೌದಿ : ಭಾರತ ಸರಕಾರ

Update: 2025-04-15 22:44 IST
ಭಾರತೀಯರ ಹಜ್ ಕೋಟಾದಲ್ಲಿ ಹತ್ತು ಸಾವಿರ ಹೆಚ್ಚಳ ಮಾಡಿದ ಸೌದಿ : ಭಾರತ ಸರಕಾರ

PC ; X 

  • whatsapp icon

ರಿಯಾದ್ : 2025ರ ಸಾಲಿನ ಹಜ್‌ ಯಾತ್ರೆಗೆ ಭಾರತೀಯ ಯಾತ್ರಿಕರ ಕೋಟಾದಲ್ಲಿ ಸೌದಿ ಆರೇಬಿಯವು 10 ಸಾವಿರದಷ್ಟು ಏರಿಕೆ ಮಾಡಿದ್ದು, ಒಟ್ಟು 1,75,025 ಮಂದಿ ಯಾತ್ರಿಕರಿಗೆ ಅವಕಾಶ ನೀಡಿದೆಯೆಂದು ಭಾರತದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಮಂಗಳವಾರ ತಿಳಿಸಿದೆ.

ಆದರೆ ಈ ಹತ್ತು ಸಾವಿರ ಈಗಾಗಲೇ ಇರುವ ಒಟ್ಟು ಸೀಟುಗಳಲ್ಲಿ ಆಗಿರುವ ಹೆಚ್ಚಳ ಅಲ್ಲ. ಸೌದಿ ಅರೇಬಿಯಾ ರದ್ದು ಮಾಡಿದ್ದ ಖಾಸಗಿ ಹಜ್ ಆಪರೇಟರ್ ಗಳ 52,000 ಸೀಟುಗಳಲ್ಲಿ ಈಗ 10 ಸಾವಿರ ಸೀಟ್ ಗಳನ್ನು ವಾಪಸ್ ಕೊಟ್ಟಿದೆ.

ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ಕಾಯ್ದಿರಿಸಲಾದ 52 ಸಾವಿರ ಭಾರತೀಯ ಹಜ್ ಯಾತ್ರಿಕರ ಸೀಟುಗಳನ್ನು ರದ್ದುಪಡಿಸಲಾಗಿದೆಯೆಂಬ ವರದಿಗಳ ಹಿನ್ನೆಲೆಯಲ್ಲಿ ತೀವ್ರ ಕಳವಳ ವ್ಯಕ್ತವಾಗಿದ್ದವು.

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಇಂದು ಎಕ್ಸ್‌ನಲ್ಲಿ ಪ್ರಕಟಿಸಿದ ಪೋಸ್ಟ್ ಒಂದರಲ್ಲಿ ‘‘ಭಾರತ ಸರಕಾರವು ಭಾರತೀಯ ಮುಸ್ಲಿಮರ ಹಜ್‌ಯಾತ್ರೆಗೆ ಅವಕಾಶ ಮಾಡಿಕೊಡುವುದಕ್ಕೆ ಅತ್ಯಧಿಕ ಆದ್ಯತೆಯನ್ನು ನೀಡುತ್ತದೆ. ಸುಸ್ಥಿರವಾದ ಪ್ರಯತ್ನಗಳಿಂದಾಗಿ ಸೌದಿಯ ಪ್ರಾಧಿಕಾರಗಳು 2014ರಲ್ಲಿ 1,36,020ರಷ್ಟಿದ್ದ ಭಾರತದ ಭಾರತದ ಹಜ್ ಕೋಟಾವನ್ನು 2025ರಲ್ಲಿ 1,75,025ಕ್ಕೇರಿಸಿವೆ ’’ ಎಂದು ತಿಳಿಸಿವೆ.

‘‘ಪ್ರಸಕ್ತ ವರ್ಷದಲ್ಲಿ ಭಾರತದ ಹಜ್ ಸಮಿತಿಯ ಮೂಲಕ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಮುಖ್ಯ ಕೋಟಾದಡಿ 1,22,518 ಯಾತ್ರಿಕರನ್ನು ನಿರ್ವಹಿಸಲಿದೆ. ವಿಮಾನ, ಸಾರಿಗೆ, ಮಿನಾ ಕ್ಯಾಂಪ್‌ ಗಳು, ವಾಸ್ತವ್ಯ ಹಾಗೂ ಸೇವೆಗಳು ಎಲ್ಲಾ ಸಿದ್ಥತೆಗಳ್ನು ಸೌದಿಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಪೂರ್ಣಗೊಳಿಸಲಾಗಿದೆ’’ ಎಂದು ಸಚಿವಾಲಯ ತಿಳಿಸಿದೆ.

ಉಳಿದ ಕೋಟಾವನ್ನು ಹಾಲಿ ಸೌದಿ ನಿಯಮಗಳ ಅನುಸಾರವಾಗಿ 26 ಹಜ್ ಗುಂಪು ಸಂಘಟಕರ (ಸಿಎಚ್‌ಜಿಓ)ಗಳ ಮೂಲಕ ವಿತರಿಸಲಾಗುವುದು ಎಂದು ಅದು ಹೇಳಿದೆ.

ಭಾರತೀಯ ಹಜ್‌ಯಾತ್ರಿಕರಿಗೆ ವಾಸ್ತವ್ಯವನ್ನು ದೊರಕಿಸಿಕೊಡುವುದಕ್ಕಾಗಿ ಸರಕಾರವು ಸಚಿವಾಲಯ ಮಟ್ಟದಲ್ಲಿ ಮಾತುಕತೆಗಳನ್ನು ನಡೆಸಿರುವುದಾಗಿಯೂ ಅಲ್ಪಸಂಖ್ಯಾತದ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.

ಈ ವರ್ಷದ ಹಜ್‌ ಯಾತ್ರೆಯು ಜೂನ್ 4ರಿಂದ ಜೂನ್ 9ರ ನಡುವೆ ನಡೆಯುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News